Vokkaliga 2.0 [免费版]

软件介绍

ಭೂಪುತ್ರರಿಗೆ ನಮಸ್ಕಾರ, ಭೂಮಂಡಲದ ಎಲ್ಲ ನಾಗರಿಕತೆ, ಸಂಸ್ಕೃತಿಗಳ ಮೂಲ ಕೃಷಿಯೇ ಆಗಿದೆ. ಕೃಷಿ ಮೂಲದಿಂದ ಹುಟ್ಟಿಬಂದ ಒಕ್ಕಲಿಗರು ನಾಗರಿಕತೆಯ ತೊಟ್ಟಿಲು ತೂಗಿದ ಜನಕರು ಎಂದೇ ಕರೆಯಬೇಕು. ಹೀಗಿ ಮಣ್ಣಿನಲ್ಲಿ ಬೀಜವರಳಿಸಿ, ಜೀವಬೆಳೆಸುವ ಮೂಲ ಕಸುಬು ಒಕ್ಕಲಿಗರದು. ಈ ಸಮುದಾಯ ಮಹಾಗುರು, ಹಾರಾಜ, ಮಹಾಕವಿಯನ್ನು ನಾಡಿಗೆ ನೀಡಿದೆ. ದೇಶ-ವಿದೇಶಗಳಲ್ಲಿ ವಿವಿಧ ವೃತ್ತಿಗಳನ್ನು ನಡೆಸುವ ಹೆಸರಾಂತ ವ್ಯಕ್ತಿಗಳು ಈ ಸಮುದಾಯದ ಕೀರ್ತಿಯನ್ನು ಬೆಳಗುತ್ತಿದ್ದಾರೆ. ಒಂದು ಸಮುದಾಯದ ಆಂತರ್ಯದಲ್ಲಿ ಕಸುವಿದ್ದರೆ ಮಾತ್ರ ಮಹಾನ್ ವ್ಯಕ್ತಿಗಳು ಸೃಷ್ಟಿಯಾಗಲು ಸಾಧ್ಯ. ಒಕ್ಕಲಿಗ ಜನಾಂಗದ ಸಾಧಕರನ್ನು ನೋಡಿದರೆ ಸಮುದಾಯದ ಅಂತರಂಗದಲ್ಲಿ ಇರುವ ಶಕ್ತಿ ಅರ್ಥವಾಗುತ್ತದೆ. ಸಮುದಾಯದ ಹಿನ್ನೆಲೆ, ಸಾಧಕರ ಮಾಹಿತಿ, ಗುರುಪೀಠದ ಪರಂಪರೆ, ಸಾಹಿತ್ಯ, ಸಂಸ್ಕೃತಿಯ ಅರಿವು... ಇವು ಪ್ರತಿ ಒಕ್ಕಲಿಗನಿಗೆ ತನ್ನ ಸಮುದಾಯದ ಬಗ್ಗೆ ಹೆಮ್ಮೆ ತರುತ್ತವೆ. ಈ ನಿಟ್ಟಿನಲ್ಲಿ ಸಮುದಾಯದೊಳಗಿನ ಅಂತಃಶಕ್ತಿಯನ್ನು ಹೆಚ್ಚಿಸುವ ಕಾರಣಕ್ಕಾಗಿ ಈ ವೇದಿಕೆಯನ್ನು ಸೃಷ್ಟಿಸಲಾಗಿದೆ. ಯಾವುದೇ ವೈಯಕ್ತಿಕ ಲಾಭಕ್ಕೂ ಇದು ಬಳಕೆಯಾಗುವುದಿಲ್ಲ. ಇದು ಒಟ್ಟಾಗಿ ಸಮುದಾಯದ ಹಿತ ಬಯಸುತ್ತದೆ. ಇದಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಬೇಕಾಗುತ್ತದೆ. ಹಾಗಾಗಿ ಸಮುದಾಯ ಪ್ರತಿ ವ್ಯಕ್ತಿ ಇದರೊಂದಿಗೆ ಬೆರೆತು ಒಂದಾಗಬೇಕಾಗಿ ಮನವಿ. ಇಲ್ಲಿರುವ ಮಾಹಿತಿಗಳ ಜೊತೆಗೆ ನಿಮಗೆ ಗೊತ್ತಿರುವ ಮಾಹಿತಿಗಳನ್ನೂ ತಿಳಿಸಿದರೆ ಹೆಚ್ಚು ಜನರಿಗೆ ತಲುಪುವಂತಾಗುತ್ತದೆ. ಇತಿ ಒಕ್ಕಲಿಗರು. ಕಾಂ

历史版本

Free Download 二维码下载
  • 软件名称: Vokkaliga
  • 软件分类: 新闻杂志
  • APK名称: com.instance.vokkaliga
  • 最新版本: 2.0
  • 支持ROM: 4.1及更高版本
  • 软件大小 : 4.19 MB
  • 更新日期: 2022-09-28