Kanakaguru 2.0 [免费版]

软件介绍

ಸ್ವಾಭಿಮಾನದ ಸಂಕೇತ ಸ್ವಾಭಿಮಾನ ಹಾಗೂ ಛಲಕ್ಕೆ ಹೆಸರಾದ ಕುರುಬ ಸಮುದಾಯ ಕ್ಷಾತ್ರ ಹಾಗೂ ಸಾಹಸಕ್ಕೆ ಹೆಸರಾಗಿದೆ. ಅಕ್ಷರ ಕಲಿಯುವ ಹಠಕ್ಕೆ ಬಿದ್ದು ಅದನ್ನು ಒಲಿಸಿಕೊಂಡ ಛಲಗಾರ ಕಾಳಿದಾಸ, ದೇವರನ್ನೇ ತನ್ನೆಡೆಗೆ ತಿರುಗಿಸಿಕೊಂಡ ಸ್ವಾಭಿಮಾನಿ ಕನಕದಾಸ ಈ ಸಮುದಾಯದ ಪ್ರತಿಮೆಯಂತೆ ಗುರುತಿಸಿಕೊಂಡಿದ್ದಾರೆ. ಅದಕ್ಕಾಗಿಯೇ ಇದಕ್ಕೆ ಕನಕಗುರು ಎಂಬ ಸಾಂಕೇತಿಕ ನಾಮವನ್ನು ಇಡಲಾಗಿದೆ. ಪುರಾಣೇತಿಹಾಸಗಳಲ್ಲಿ ಸಮುದಾಯದ ಮೂಲವನ್ನು ಹುಡುಕಬಹುದಾಗಿದೆ, ಮಹಾಭಾರತದ ಕುರುವಂಶಕ್ಕೂ ಈ ಸಮುದಾಯದ ಹೆಸರಿಗೂ ಹೋಲಿಕೆ ಮಾಡಲಾಗುತ್ತಿದೆ. ವಿಜಯನಗರ ಸಾಮ್ರಾಜ್ಯದ ಬಹುಪಾಲು ರಾಜರು ಈ ಸಮುದಾಯದವರು ಎಂದು ಇತಿಹಾಸಕಾರರು ಹೇಳುತ್ತಾರೆ. ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಕುರುಬ ಸಮುದಾಯವಿದ್ದು, ಬೇರೆ ಬೇರೆ ಹೆಸರುಗಳಿಂದ ಗುರುತಿಸಲಾಗುತ್ತಿದೆ. ರಾಜ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಕುರುಬ ಸಮುದಾಯದ ಜನ ಇತ್ತೀಚಿನ ದಿನಗಳಲ್ಲಿ ರಾಜಕೀಯ, ಶೈಕ್ಷಣಿಕ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಬೆಳೆಯುತ್ತಿರುವುದು ಗಮನಾರ್ಹ. ಮೂಲತಃ ಕುರುಬ ಸಮುದಾಯ ವ್ಯವಸಾಯ ವೃತ್ತಿಯಿಂದ ಬಂದವರು. ಕುರಿಗೂ ಸಮುದಾಯಕ್ಕೂ ನೇರ ಸಂಬಂಧವಿಲ್ಲದೇ ಇದ್ದರೂ ಇದರ ಅರ್ಥವನ್ನು ಕುರಿಗಾಹಿ ಎಂದು ಗ್ರಹಿಸಲಾಗಿದೆ. ಕುರುಬ ಎಂದರೆ ಹುಡುಕುವುದು ಎಂಬರ್ಥವೂ ಇದೆ. ಮಹಾಭಾರತದ ಕುರುವಂಶದ ಹೆಸರನ್ನು ಇಲ್ಲಿ ಗಮನಿಸಬಹುದು. ಕುರುಬ ಸಮುದಾಯವನ್ನು ಹಾಲುಮತ ಎಂದೂ ಸಹ ಗುರುತಿಸಲಾಗುತ್ತದೆ. ಹಾಲುಮತ ಎಂದರೆ ಸಮಾಜವನ್ನು ರಕ್ಷಿಸುವವರು ಎಂದರ್ಥ. ಐತಿಹಾಸಿಕವಾಗಿ ದೊಡ್ಡ ಹೆಸರನ್ನು ಹೊಂದಿರುವ ಮಹಾನ್ ವ್ಯಕ್ತಗಳು ಈ ಸಮುದಾಯದಿಂದ ಬಂದಿದ್ದಾರೆ. ಕೃಷ್ಣದೇವರಾಯ ಸೇರಿದಂತೆ ಹಲವಾರು ರಾಜರು. ಸಂಗೊಳ್ಳಿರಾಯಣ್ಣನಂತಹ ಸ್ವಾಮಿನಿಷ್ಠ ಹೋರಾಟಗಾರರಿಗೆ ಈ ಸಮುದಾಯ ಜನ್ಮ ನೀಡಿದೆ. ಈಗಷ್ಟೇ ರಾಜಕೀಯ ಪ್ರಾಬಲ್ಯ ಹೊಂದುತ್ತಿರುವ ಈ ಸಮುದಾಯ ಹೊಸ ಸಾಧ್ಯತೆಗಳಿಗೆ ತೆರೆದುಕೊಳ್ಳಬೇಕಾಗಿದೆ. ಈ ತಂತ್ರಜ್ಞಾನದ ಮೂಲಕ ಸಮುದಾಯದ ಮಹತ್ವವನ್ನು ತಿಳಿಯುವ ಜೊತೆಗೆ ಜನಾಂಗದೊಳಗಿನ ಆಗು ಹೋಗುಗಳ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಇದರ ಮೂಲಕ ಸಮುದಾಯ ಇನ್ನಷ್ಟ ಆಳ – ವಿಸ್ತಾರಗಳನ್ನು ಕಂಡುಕೊಳ್ಳಲಿ ಎಂಬುದು ನಮ್ಮ ಆಶಯ. ಇತಿ. ಕನಕಗುರು. ಕಾಂ

历史版本

Free Download 二维码下载
  • 软件名称: Kanakaguru
  • 软件分类: 新闻杂志
  • APK名称: com.microtree.kanakaguru
  • 最新版本: 2.0
  • 支持ROM: 4.1及更高版本
  • 软件大小 : 4.16 MB
  • 更新日期: 2022-09-28